Translate

Thursday 31 December 2020

 


                                                       ಹೊಸವರ್ಷಕ್ಕೆ ಹೊಸ ಸಂಕಲ್ಪ

ಹೊಸವರ್ಷಕ್ಕೆ ಹೊಸ ಸಂಕಲ್ಪ

ಜಾಸ್ತಿ ಏನೂಇಲ್ಲ ಎಲ್ಲವು ಸ್ವಲ್ಪ, ಸ್ವಲ್ಪ

ಆರೋಗ್ಯಕರ ಜೀವನ ನಡಿಸುವ ಸಂಕಲ್ಪ

ತಮ್ಮನ್ನು ಹಾಗು ಪರಿಸರವನ್ನು ಶುದ್ಧವಾಗಿರಿಸಿಕೊಳ್ಳುವ ಸಂಕಲ್ಪ

ಎಲ್ಲವನ್ನು ಮಿತವಾಗಿ ಬಳಿಸಿಕೊಳ್ಳುವ ಸಂಕಲ್ಪ

ದುಷ್ಟರಿಂದ ದುಶ್ಚಟಗಳಿಂದ ದೂರವಿರುವ ಸಂಕಲ್ಪ

ಪ್ರೀತಿ ಪ್ರೇಮದಿಂದ ಬಾಳಬೇಕೆಂಬ ಸಂಕಲ್ಪ

ಮನೆಯವರ ಜೊತೆ ಉತ್ತಮ ಸಮಯ ಕಳೆಯಬೇಕೆಂಬ ಸಂಕಲ್ಪ

ಹಿರಿಯರನ್ನು ಗೌರವಿಸಿಕೊಂಡು ಹೋಗಬೇಕೆಂಬ ಸಂಕಲ್ಪ

ಕಿರಿಯರಿಗೆ ಮಾರ್ಗದರ್ಶಿ ಆಗಬೇಕೆಂಬ ಸಂಕಲ್ಪ

ಉತ್ತಮ ಜ್ಞಾನ ಪಡೆದುಕೊಳ್ಳುವ ಸಂಕಲ್ಪ

ಕತ್ತಲಿಂದ ಬೆಳಕಿನಡೆಗೆ ನಡಿಯುವ ಸಂಕಲ್ಪ

ಪರಮಾತ್ಮನ ನಿಜ ಸ್ವರೂಪ ತಿಳಿಯುವ ಸಂಕಲ್ಪ

ಹೊಸವರ್ಷಕ್ಕೆ ಹೊಸ ಸಂಕಲ್ಪ

ಹೊಸವರ್ಷಕ್ಕೆ ಹೊಸ ಸಂಕಲ್ಪ

ಜಾಸ್ತಿ ಏನೂಇಲ್ಲ ಎಲ್ಲವು ಸ್ವಲ್ಪ, ಸ್ವಲ್ಪ


Saturday 25 January 2014

ಇರುವುದೊಂದೆ ಜೀವನ



ಇರುವುದೊಂದೆ ಜೀವನ 
ಜೀವಿಸಿ ಪ್ರತಿ ಕ್ಷಣ ಪ್ರತಿ ದಿನ 

ಬರದೆಂದು ಮತ್ತೆ ಯೌವನ 
ಜೀವಿಸಿ ಪ್ರತಿ ಕ್ಷಣ ಪ್ರತಿ ದಿನ 

ಪಕ್ಕಕಿಡಿ  ಅಂತೆ ಕಂತೆಗಳ ಪುರಾಣ 
ಜೀವಿಸಿ ಪ್ರತಿ ದಿನ ಪ್ರತಿ ಕ್ಷಣ 

Friday 24 January 2014

ಬಗವದ್ಗೀತೆ Bhagavad-Gita Favorites



1. ಆತ್ಮನ ಸ್ವರೂಪವನ್ನು ತಿಳಿದವನು ಸತ್ತವರಿಗಾಗಲಿ ಇರುವವರಿಗಾಗಲಿ ಅಳುವುದಿಲ್ಲ

2. ತಪ್ಪಿಸಲಾರದ ವಿಷಯಕ್ಕೆ ಚಿಂತಿಸಿ ಲಾಬವೇನು????

3. ಮರ್ಯದಸ್ತನಿಗೆ ಅಪನಿಂದೆಯು ಮರಣಕಿಂತಲೂ ಕಿಳಾದದ್ದು

4.  ಕರ್ಮ ಮಾಡುವುದರಲ್ಲಿಯೇ ನಿನಗೆ ಅಧಿಕಾರ ಕರ್ಮದ ಫಲದಲ್ಲಿ ಆಸಕ್ತಿ ಯಾವಾಗಲು ಬೇಡ 

Self thoughts

1. Problems wont occur themselves, someone should be the creator most of the time that's you..

2. If there is no solution to a problem then for the time being neglecting problem is the best solution

3. Delay in decision making often results in Frustration

4. Opportunities won't come easily, when it comes utilize it to maximum don't let it go easily

5. Try to change things which you can or else just ignore it

6. Silence has the power of healing almost every problem

7. Success and Failure comes & goes, its a result of your action

8. It takes time to climb the ladder of success, Failure happens in no time

9. Real value of Talent gets recognized only when it is exhibited

10. Enjoy your given time do not waste it.

11. Greatest of all Talents is the Talent of Extracting Hidden Talents

Safe Place ಸುಭದ್ರ ನೆಲೆ

ಬೆಚ್ಚಗೆ ಭದ್ರವಾಗಿ
ತಾಯಿಯ ಗರ್ಭದಲ್ಲಿ ಶಿಶುವಾಗಿ
9 ತಿಂಗಳು ಪೋಷಣೆಗೊಳಗಾಗಿ
ಜನ್ಮ ತಾಳುವ ಸಲುವಾಗಿ
ಗರ್ಭದಿಂದ ದೂರಾಗಿ
ಗರ್ಭ ಸಂಬಂದ ಕಡಿದಂತಾಗಿ
ಹೊರಬಂದಾಗ ಮಗುವು ಅಳುವುದು ಜೋರಾಗಿ
ಕ್ಷಣಗಳು ಕಳೆದಂತೆ ತಾಯಿಯ ಗುರ್ತಿಸಿ
ತಾಯಿಯ ಜೊತೆ ಸಂಬಂಧ ಬೆಳೆಸಿ
ತಾಯಿಯ ತೊಡೆಯ ಮೇಲೆ   
ಮತ್ತೆ ಸಿಕ್ಕಾಗ ಸುಭದ್ರ ನೆಲೆ                
ಹರಿಸುವುದಾಗ ನಗುವ ಅಲೆ                                                                                                                                                               
                                                                                                      

Monday 20 January 2014

Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ 
ನಿನ್ನ ಇಂದಿಗೆ ನಿನ್ನ ನಾಳೆಗೆ 
ನೀನೆ ಕಾರಣ ನಿನ್ನ ಬಾಳಿಗೆ 

Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ
ಓಡದೆ ಇದ್ದರು ಛಲ ಬಿಡಬೇಡ 
ಬಾಳ ಓಟದಿ ಗುರಿಬಿಡಬೇಡ 

Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ
ಇಂದೆಲ್ಲ ನಾಳೆ ಗೆಲುವು ನಿನ್ನದೇ 
ಗುರಿಯ ಬಿಡದೆ ಮುನ್ನುಗು ಎಂದು, ನೀ ಎದೆ ಗುಂದದೆ

Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ 

Don't you ever ಬಾಳಲ್ಲಿ Never
ಬಿಡದಿರು ನಿನ್ನ ಆತ್ಮಬಲವನ್ನ   
ನಿನ್ನ ಇಂದಿಗೆ ನಿನ್ನ ನಾಳೆಗೆ             ನೀನೆ ಕಾರಣ ನಿನ್ನ ಬಾಳಿಗೆ 

Saturday 18 January 2014

ಅಮ್ಮ Amma: Mother

ನಾ ಕಂಡ ಮೊದಲ ಗುರು ನೀನೆ ಅಲ್ಲವೇನಮ್ಮ 
ಶಿಕ್ಷಿಸಿದೆ ರಕ್ಷಿಸಿದೆ ಉಳಿಸಿದೆ ಬೆಳಿಸಿದೆ 
ನನ್ನ ಕಾಲ ಮೇಲೆ ನೀ ನನ್ನ  ನಿಲ್ಲಿಸಿದೆ 

ನಾ ಕಂಡ ಮೊದಲ ಸ್ನೇಹಿತೆ ನೀನೆ ಅಲ್ಲವೇನಮ್ಮ 

ಪ್ರೀತಿಸಿದೆ, ಪೋಷಿಸಿದೆ ಸ್ನೇಹದ ಮೊಗವ ತಿಳಿಸಿದೆ 
ನನ್ನನು ಸ್ನೇಹ ಜೀವಿಯಾಗಿ ನೀ ಮಾಡಿದೆ 

ನಾ ಕಂಡ ಮೊದಲ ವೈರಿಯೂ  ನೀನೆ ಅಲ್ಲವೆನಮ್ಮ 

ಎದರಿಸಿದೆ ಬೆದರಿಸಿದೆ ನಿಂದಿಸಿದೆ 
ತೊಡೆ ಇಂಡಿ ಗೊಳೋ ಅಂತ ಅಳುವಂತೆ ಮಾಡಿದೆ 
ಆದರೆ ದುಷ್ಟರಿಂದ ದುಷ್ಟತನದಿಂದ ದೂರ ವಿರುವಂತೆ ಮಾಡಿದೆ 
ನನ್ನನು ಸಬ್ಯಾನಾಗಿ ಪರಿವರ್ತಿಸಿದೆ 

ನಾ ಕಂಡ ಮೊದಲ ದೇವತೆಯು ನೀನೆ ಅಲ್ಲವೆನಮ್ಮ 

ಬೇಡಿದೆಲ್ಲವ ಕರುಣಿಸಿದೆ 
ಬೇಡದೆ ಬೇಕಾಗಿದ್ದನ್ನು ಕರುಣಿಸಿದೆ 
ಪರಮಾತ್ಮನಲ್ಲಿ ನಂಬಿಕೆ ಬೆಳಿಸಿದೆ 
ಅದ್ಯಾತ್ಮದ ದಾರಿ ತೋರಿಸಿದೆ