ಬೆಚ್ಚಗೆ ಭದ್ರವಾಗಿ
ತಾಯಿಯ ಗರ್ಭದಲ್ಲಿ ಶಿಶುವಾಗಿ
9 ತಿಂಗಳು ಪೋಷಣೆಗೊಳಗಾಗಿ
ಜನ್ಮ ತಾಳುವ ಸಲುವಾಗಿ
ಗರ್ಭದಿಂದ ದೂರಾಗಿ
ಗರ್ಭದ ಸಂಬಂದ ಕಡಿದಂತಾಗಿ
ಹೊರಬಂದಾಗ ಮಗುವು
ಅಳುವುದು
ಜೋರಾಗಿ
ಕ್ಷಣಗಳು ಕಳೆದಂತೆ
ತಾಯಿಯ
ಗುರ್ತಿಸಿ
ತಾಯಿಯ ಜೊತೆ ಸಂಬಂಧ ಬೆಳೆಸಿ
ತಾಯಿಯ ತೊಡೆಯ ಮೇಲೆ
ಮತ್ತೆ ಸಿಕ್ಕಾಗ ಸುಭದ್ರ ನೆಲೆ
ಹರಿಸುವುದಾಗ ನಗುವ ಅಲೆ
No comments:
Post a Comment