Translate

Saturday 18 January 2014

ಅಮ್ಮ Amma: Mother

ನಾ ಕಂಡ ಮೊದಲ ಗುರು ನೀನೆ ಅಲ್ಲವೇನಮ್ಮ 
ಶಿಕ್ಷಿಸಿದೆ ರಕ್ಷಿಸಿದೆ ಉಳಿಸಿದೆ ಬೆಳಿಸಿದೆ 
ನನ್ನ ಕಾಲ ಮೇಲೆ ನೀ ನನ್ನ  ನಿಲ್ಲಿಸಿದೆ 

ನಾ ಕಂಡ ಮೊದಲ ಸ್ನೇಹಿತೆ ನೀನೆ ಅಲ್ಲವೇನಮ್ಮ 

ಪ್ರೀತಿಸಿದೆ, ಪೋಷಿಸಿದೆ ಸ್ನೇಹದ ಮೊಗವ ತಿಳಿಸಿದೆ 
ನನ್ನನು ಸ್ನೇಹ ಜೀವಿಯಾಗಿ ನೀ ಮಾಡಿದೆ 

ನಾ ಕಂಡ ಮೊದಲ ವೈರಿಯೂ  ನೀನೆ ಅಲ್ಲವೆನಮ್ಮ 

ಎದರಿಸಿದೆ ಬೆದರಿಸಿದೆ ನಿಂದಿಸಿದೆ 
ತೊಡೆ ಇಂಡಿ ಗೊಳೋ ಅಂತ ಅಳುವಂತೆ ಮಾಡಿದೆ 
ಆದರೆ ದುಷ್ಟರಿಂದ ದುಷ್ಟತನದಿಂದ ದೂರ ವಿರುವಂತೆ ಮಾಡಿದೆ 
ನನ್ನನು ಸಬ್ಯಾನಾಗಿ ಪರಿವರ್ತಿಸಿದೆ 

ನಾ ಕಂಡ ಮೊದಲ ದೇವತೆಯು ನೀನೆ ಅಲ್ಲವೆನಮ್ಮ 

ಬೇಡಿದೆಲ್ಲವ ಕರುಣಿಸಿದೆ 
ಬೇಡದೆ ಬೇಕಾಗಿದ್ದನ್ನು ಕರುಣಿಸಿದೆ 
ಪರಮಾತ್ಮನಲ್ಲಿ ನಂಬಿಕೆ ಬೆಳಿಸಿದೆ 
ಅದ್ಯಾತ್ಮದ ದಾರಿ ತೋರಿಸಿದೆ 




No comments:

Post a Comment